Wednesday, April 28, 2010

ಸ್ಕೂಲ್ ಅಂದ್ರೆ ...

ನಮಸ್ಕಾರ,

ನನಗೀಗ ಯಾರ ಜೊತೆ ಯಾವ ಭಾಷೆ ಮಾತನಾಡಬೇಕು ಎಂದು ಅವರ ಮುಖಚರ್ಯೆಯಿಂದ ತಿಳಿಯುತ್ತಿದೆ ಎಂದು ಅಪ್ಪ ಅಮ್ಮ ಹೇಳುತ್ತಿದ್ದಾರೆ.  ಮೊನ್ನೆ ಭಾನುವಾರ ಮುಂಜಾನೆ ನೋಡಿ.  ನಾನು ಬೇಗ ಎದ್ದು ಅಪ್ಪ ಮತ್ತು ಅಮ್ಮನನ್ನು ಎಬ್ಬಿಸಿ ನನ್ನ ಕೆಲಸ (ಮತ್ತೇನಿಲ್ಲ ನನ್ನ ರೈಲು ಬಂಡಿಗಳ ಜೊತೆ ಆಟ ಆಡುವ) ಸಾಧಿಸುವ ಹುನ್ನಾರ ನಡೆಸುತ್ತಿದ್ದೆ.   ಅಪ್ಪನಿಗೆ ಹೇಳಿದೆ "Appa, please get up".  ಅಮ್ಮ ಎಂದಳು "ಸಾರಂಗ, ತುಳುಟು ಪಾತೆರ್" ಅಂತ (ನಮ್ಮ ಮಾತೃ ಭಾಷೆ ತುಳು ನೋಡಿ.  ಅಮ್ಮನಿಗೆ ನನ್ನ ತುಳು ಭಾಷೆಯನ್ನು ಉತ್ತಮಗೊಳಿಸುವ ತವಕ!).  ನಾನಂದೆ "Oh Sure!"

ಇದಕ್ಕಿಂತ ಎರಡು ದಿನ ಹಿಂದೆ ಅಂದ್ರೆ ಶುಕ್ರವಾರ, ಅಮ್ಮ ನೃತ್ಯ ಕಲಿಸಲು ಹೋಗುವ ಮುನ್ನ, ನನ್ನನ್ನು ಭಾರತಿ ಅಜ್ಜಿ ಅವರಲ್ಲಿ ಬಿಡಲು ಹೋದಾಗ, ಅವರನ್ನು ನೋಡಿ ನನ್ನ Thomas ರೈಲು ಗಾಡಿ ತೋರಿಸಿ ನಾನಂದೆ "भारति aunty मेरे पास Thomas है"

ಕಳೆದ ವಾರ ಪದ್ಮ ದೊಡ್ಡ ಅವರನ್ನು ಕಂಡ ಕೂಡಲೇ, ನನ್ನ ಕನ್ನಡ ತೊದಲು ನುಡಿಯಲ್ಲಿ ಹೇಳಿದೆ "ನಾನು ನ್ಯೂ ಜೆರ್ಸಿಗೆ ಬಂದೆ".

ಹೇಗಿದೆ, ನನ್ನ ಭಾಷಾ ಜ್ಞಾನ?  ಮತ್ತೆ ಸಿಗೋಣ,

ನಿಮ್ಮವನೇ ಆದ
ಸಾರಂಗ

2 comments: