Sunday, March 14, 2010

ಹಾಲು - ಹಣ್ಣು

ನಮಸ್ತೆ,
ನಾನು ಹಾಲು ಹಣ್ಣು ತಿನ್ನುವ ಪರಿಯ ಬಲ್ಲಿರೇನಯ್ಯ? ಈ ಕೆಳಗಿನ ಚಿತ್ರಗಳನ್ನು ನೋಡಿ. ನಾನು ಹಾಲು ಕುಡಿಯುವ ಕ್ಷಣಗಳನ್ನು ಅಪ್ಪ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ನೋಡಿ. ಮತ್ತೆ ಪಾಂಡಾ ಕರಡಿಯ ಚಿತ್ರವಿರುವ ಪುಟಾಣಿ ಬಾಲ್ದಿಯಲ್ಲಿ ಇರುವುದು ನನಗಿಷ್ಟವಾದ ಖರಬೂಜ (cantaloupe) ಹಣ್ಣು. ನಾನು ಈ ಹಣ್ಣು ತಿನ್ನುವುದು ಬಾಲ್ದಿಗಟ್ಟಲೆ ಎಂದು ತಿಳಿದುಕೊಳ್ಳಬೇಡಿ. ಈ ದಿನ ಬೇರೆ ಪಾತ್ರೆ ನನ್ನ ಕೈಗೆ ಸಿಕ್ಕಲಿಲ್ಲ. ಸರಿ, ಇದ್ದುದರಲ್ಲಿ ಸುಧಾರಿಸಿಕೊಳ್ಳುವುದು ನಮ್ಮ ಕ್ರಮ.






ಮತ್ತೆ ಸಿಗೋಣ
ನಿಮ್ಮ ಪುಟ್ಟ ಸಾರಂಗ.